Wednesday, February 14, 2007

ಪ್ರೇಮಿಗಳ ದಿನಾಚರಣೆ.

'ವಾಲೆಂಟೈನ್ಸ್ ಡೇ' ಹಿಂದಿರುವ ಚರಿತ್ರೆ.

ಹಿಂದೆ ರೋಮ್ ನಲ್ಲಿ ಕ್ಲಾಡಿಯಸ್ ಎಂಬ ರಾಜನು ತನ್ನ ಪ್ರಜೆಗಳನ್ನು ಯುದ್ದಕ್ಕೆ ಸೇರುವಂತೆ ಪೀಡಿಸುತ್ತಿದ್ದನಂತೆ ಆದರೆ ಇವನ ಈ ಹುಚ್ಚಿನಿಂದ ಬೇಸತ್ತ ಜನ ತಲೆಮರೆಸಿಕೊಳ್ಳುತ್ತಿದ್ದರಂತೆ. ಇದರಿಂದ ಕೋಪಗೊಂಡ ರಾಜ ಅವರುಗಳು ಮದುವೆಯಾಗದಂತೆ ತಡೆಯೊಡ್ಡಿದ್ದನು.

ಅದೇ ಸಂದರ್ಭದಲ್ಲಿ ವಾಲೆಂಟೈನ್ ಎಂಬುವನೊಬ್ಬನು ಈ ಪ್ರೇಮಿಗಳನ್ನು ಒಂದುಗೂಡಿಸಲು ಗುಪ್ತ ಮದುವೆಗಳನ್ನು ಮಾಡಿಸುತ್ತಿದ್ದ. ಇದನ್ನು ತಿಳಿದ ರಾಜನು ಆ 'ವಾಲೆಂಟೈನ್' ನನ್ನು ಆಜೀವ ಪರ್ಯಂತ ಸೆರೆಯಲ್ಲಿಟ್ಟನು. ಆಗ ಅವನ ಈ ಕಾರ್ಯವನ್ನು ಮುಂದುವರೆಸಿಕೊಂಡು ಹೋದವಳು ಅಲ್ಲಿಯ ಕಾವಲುಗಾರನ ಮಗಳು, ಅವಳು ದಿನಾ ಬಂದು ಇವನನ್ನ ಭೇಟಿಯಾಗುತ್ತಿದ್ದಳು.

ಪೆಬ್ರವರಿ 14 ರಂದು ಅವನು ಕೊನೆಯುಸಿರೆಳೆದನು, ಸಾಯುವ ಮುನ್ನ ಅವಳಿಗೆ ಒಂದು ಪ್ರೇಮ ಪತ್ರವನ್ನು ಬರೆದು ಅದರ ಕೊನೆಯಲ್ಲಿ love from your Valentine ಅಂತ ಬರೆದಿದ್ದನಂತೆ.

ಅದರಂತೆ ಜನ ಆ ದಿನವನ್ನ 'ವಾಲೆಂಟೈನ್ ಡೇ' ಅಥವಾ 'ಪ್ರೇಮಿಗಳ ದಿನಾಚರಣೆ' ಎಂದು ಆಚರಣೆಗೆ ತಂದರು ಅನ್ನೋದು ಕಥೆ.

{ನಿನ್ನೆ ಯಾವುದೋ ಪತ್ರಿಕೆಯಲ್ಲಿ ಓದುತ್ತಿದ್ದೆ. ಅಮೇರಿಕದಲ್ಲಿ ಪ್ರೇಮಿಗಳ ದಿನಾಚರಣೆ ಯನ್ನು ಪ್ರೇಮಿಯ ಜೊತೆ ಆಚರಿಸುವುದಿಲ್ಲ ಆ ದಿವಸ ಮನೆಯವರೊಂದಿಗೆ ಕಳೆಯುತ್ತೇವೆ ಅಂತ ಹೇಳಿದ್ದಾರೆ. ಪ್ರೇಮಕ್ಕೆ ಇಂಥಾ ಮುಕ್ತವಾತಾವರಣ ಇದ್ದೂ ಇವರುಗಳಿಗೆ ಈ ಆಚರಣೆ ಬೇಸರ ತಂದಿದೆಯೇ? ತಿಳಿಯದಾಗಿದೆ}. ಇಂಥಾ ಒಂದು ಆಚರಣೆ ಇದೆ ಎಂದು ನನಗೆ ತಿಳಿದದ್ದೇ ಈ ಅಮೇರಿಕಾ ದೇಶಕ್ಕೆ ಬಂದ ಮೇಲೆ. ಈಗಂತೂ ಭಾರತದಲ್ಲಿ ಇದು ಬಹಳೇ ಹಳೇ ಆಚರಣೆ ಅನ್ನುವಂತಾಗಿದೆ.

ಒಟ್ಟಿನಲ್ಲ್ಲಿ ಇಡೀ ಪ್ರಪಂಚವೇ ಪ್ರೇಮಿಗಳ ಆಚರಣೆಯನ್ನು ಶ್ರದ್ದಾ ಭಕ್ತಿಗಳಿಂದ ಆಚರಿಸುತ್ತಿದೆ.

ಪ್ರೇಮವೆಂದರೆ ದೇವರು, ಪ್ರೇಮವೊಂದು ಅಗೋಚರವಾದ ಶಕ್ತಿ, ಪ್ರೇಮ ದೈವೀಕವಾದದ್ದು ಇದು ನನ್ನ ಒಂದು ಭಾವನೆ. ಅದೇನೇ ಇರಲಿ ಈ ಪ್ರೇಮಿಗಳ ದಿನಾಚರಣೆಗೆ ನನ್ನದೊಂದು ಕಾಣಿಕೆ....

ಚಿತ್ರ: ಗೆಜ್ಜೆಪೂಜೆ (1970)
ಸಂಗೀತ: ವಿಜಯಭಾಸ್ಕರ್
ಸಾಹಿತ್ಯ: ವಿಜಯನಾರಸಿಂಹ
ಗಾಯಕರು: ಪಿ.ಬಿ.ಶ್ರೀನಿವಾಸ್ , ಎಸ್.ಜಾನಕಿ.

ಪಂಚಮವೇದಾ ಪ್ರೇಮದನಾದಾ
ಪ್ರಣಯದ ಸರಿಗಮ ಭಾವಾನಂದಾ
ಹೃದಯ ಸಂಗಮ ಅನುರಾಗ ಬಂಧಾ
ರಾಗರಾಗಿಣಿ ಯೋಗಾನು ಬಂಧಾ ...ಪಂಚಮ ವೇದಾ....

ಜೀವಜೀವದ ಸ್ವರಸಂಚಾರಾ
ಅಮೃತ ಚೇತನ ರಸಧಾರಾ
ರಾಧಾಮಾಧವ ವೇಣುವಿಹಾರಾ
ಪ್ರೀತಿಯೆ ಗೀತೆಯ ಜೀವನಸಾರಾ ...ಪಂಚಮವೇದಾ..

ಪ್ರೇಮಗಾನದಿ ಪರವಶವೀಧರೆ
ಮಾನಸಲೋಕದ ಗಂಗೆಯಧಾರೆ
ದಿವ್ಯದಿಗಂತದ ಭಾಗ್ಯತಾರೆ
ಭವ್ಯ ರಸಿಕತೆ ಬಾಳಿನಾಸರೆ ...ಪಂಚಮವೇದಾ...

*** *** ***

3 comments:

sritri said...

"ಖಜಾನೆ" ಎಂಬ ಹೆಸರು ತುಂಬಾ ಚೆನ್ನಾಗಿದೆ. ಪ್ರೇಮಿಗಳ ದಿನಕ್ಕೆ ಪಂಚಮವೇದ, ಪ್ರೇಮದ ನಾದಕ್ಕಿಂತ ಉತ್ತಮ ಕಾಣಿಕೆ ಬೇರಾವುದಿದೆ?!

sritri said...

ಪ್ರೇಮಿಗಳ ದಿನಕ್ಕೆ "ಪಂಚಮ ವೇದ"ಕ್ಕಿಂತ ಉತ್ತಮ ಕೊಡುಗೆ ಬೇರೇನಿದೆ! ಖಜಾನೆ ಬೇಗ ತುಂಬಿಕೊಳ್ಳಲಿ :)

Meera Krishnamurthy said...

ಧನ್ಯವಾದಗಳು ತ್ರಿವೇಣಿ.