Friday, March 02, 2007

ಮರಳಿಗೂಡಿಗೆ-ನೀ ನುಡಿಯದಿರಲೇನೂ...

ಚಿತ್ರ: ಮರಳಿಗೂಡಿಗೆ (1984)
ಸಾಹಿತ್ಯ: ಕೆ.ಎಸ್.ನಿಸ್ಸಾರ್ ಅಹಮದ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ















ನೀ ನುಡಿಯದಿರಲೇನೂ ಬಯಲಾಗಿಹುದು ಎಲ್ಲಾ
ಕಣ್ಣಂಚಿನಾ ಕೊನೆಯಾ ಭಾವದಲ್ಲೀ
ಬಗೆನೋವ ಭಾರಕ್ಕೇ ಬಳಲಿರುವ ಮೊಗವಿಹುದೂ
ಕಾರ್ಮೋಡದಾಗಸದಾ ರೀತಿಯಲ್ಲೀ....


ಬಾಡಿರುವ ಮೊಗದಲ್ಲಿ ಕಳೆಯಿರದ ಕಣ್ಣಲ್ಲೀ
ನಿನ್ನ ಸಿರಿವಂತಿಕೆಯಾ ಕಾಣುವಾಸೇ
ಸೊಗವಿರದ ತುಟಿಯಲ್ಲಿ ತೂಗಿರುವ ನಗೆಯಲ್ಲಿ
ಸವಿಗನಸಿನಿರುಳುಗಳಾ ಹುಡುಕುವಾಸೇ...


ಅರೆಗಳಿಗೆ ಸುಖಸ್ವಪ್ನಾ ಬರಲಾರದೆಮ್ಮೊಡನೇ
ವಾಸ್ತವತೆ ಗಹಗಹಿಸೀ ಸೆಳೆಯಲಿಹುದೂ
ಮರೆತೆಲ್ಲ ಕೊನೆಗೊಮ್ಮೇ ಮನಬಿಚ್ಚಿ ನಕ್ಕುಬಿಡೂ
ಬೇರೆ ದಾರಿಯ ನಾವು ಹಿಡಿಯಬಹುದೂ....

****** ****** ****** ******

5 comments:

Anonymous said...

ಇದು - "ನೀ ನುಡಿಯದಿರಲೇ ಏನೂ" ಅಲ್ಲ -

"ನೀ ನುಡಿಯದಿರಲೇನೂ" ಆಗಬೇಕು. ಅಂದರೆ ನೀನು ಬಾಯಿಬಿಟ್ಟು ಏನೂ ಹೇಳದಿದ್ದರೂ ಕಣ್ಣು,ಮುಖಭಾವದಿಂದಲೇ ನನಗೆ ಎಲ್ಲಾ ತಿಳಿಯಿತು ಎಂಬ ಅರ್ಥವಿದೆ.

Vattam said...

ಮೀರ, ಇದೆ ಹಾಡನ್ನು ರತ್ನಮಾಲ ಪ್ರಕಾಶ್ ಹಾಡಿರೊದು ಕೇಳಿ. http://www.kannadaaudio.com/Songs/Bhaavageethe/home/Legends-RatnamalaPrakash.php

Meera Krishnamurthy said...
This comment has been removed by the author.
Meera Krishnamurthy said...

ತ್ರಿವೇಣಿ, ನೀನು ಬರೆದಿರುವುದೇ ಸರಿ ಇರಬಹುದು, ಯಾಕೇಂದ್ರೆ ನಾನು ಭಾವಗೀತೆ ರೂಪದಲ್ಲಿ ಈ ಹಾಡನ್ನ ಎಲ್ಲೂ ಕೇಳಿಲ್ಲ. ಇದನ್ನ ಈ ಚಿತ್ರಕ್ಕೆ ಅಳವಡಿಸಿ,ಸಿನೆಮಾ ಸಂಗೀತಕ್ಕೆ ತಕ್ಕಂತೆ ಸಾಹಿತ್ಯ ತಿದ್ದಿರಬಹುದು.ಅದಕ್ಕೇ 'ನೀ ನುಡಿಯದಿರಲೇನೂ'ಅನೋದನ್ನ 'ನೀ ನುಡಿಯದಿರಲೆ ಏನೂ' ಅಂತ ಪದ ಬೇರ್ಪಡಿಸಿದ್ದಾರೆ ಅನ್ನಿಸತ್ತೆ. ಈ ಹಾಡನ್ನ ತುಂಬಾ ಹಿಂದೆ ಕೇಳಿದ್ದು. ಆದರೆ ಎಸ್.ಪಿ.ಬಿ ಅವರು ಅದನ್ನ 'ಏನೂ' ಅಂತಾನೇ ಹಾಡಿದ್ದಾರೆ.

ಈಗ ತಾನೇ 'ಶಾಂತಲಾ' ಅವರು ಕಳಿಸಿದ ಭಾವಗೀತೆ ಕೇಳಿದೆ. ಸಾಹಿತ್ಯ ತಿದ್ದಿದ್ದೇನೆ. ಪ್ರತಿಕ್ರಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.

Meera Krishnamurthy said...

ಶಾಂತಲಾ, ನೀವು ಈ ಹಾಡಿನ ಕೊಂಡಿ ಕಳಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಈ ಹಾಡನ್ನ ನಾನು ಕೇಳೇ ಇರ್ಲಿಲ್ಲ. ಈ ಗೀತೆಯನ್ನು ದು:ಖದ ಸನ್ನಿವೇಶಕ್ಕೆ ಅಂತ ಈ ಚಿತ್ರದಲ್ಲಿ ಅಳವಡಿಸಿದ್ದಾರೆ. ಆದರೆ ಭಾವಗೀತೆಯಲ್ಲಿ ಗಾಯಕಿ ಯಾವ ಭಾವನೆಯಿಂದ ಹಾಡಿದ್ದಾರೆ ಅಂತ ಗೊತ್ತಾಗಲ್ಲ.