Saturday, March 31, 2007

ಅರಿಶಿನ ಕುಂಕುಮ-ನಾನೂ ನೀನೂ ಜೊತೆಯಿರಲೂ

ಚಿತ್ರ: ಅರಿಶಿನ ಕುಂಕುಮ (1970)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯಕರು: ಡಾಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ















ಹಾಡು ಕೇಳಿ.

ನಾನೂ ನೀನೂ ಜೊತೆಯಿರಲೂ ಕಾಲದ ನೆನಪೇ ಬೇಕಿಲ್ಲ
ಋತುಗಳೂ ಕಾಲದ ಮಾತುಗಳೂ ಅವುಗಳ ಭೇದವೇ ನಮಗಿಲ್ಲಾ......ನಾನೂ ನೀನೂ...

ಕಣ್ಣೂ ಕಣ್ಣೂ ಕಲೆತಿರಲೂ
ಹಗಲೂ ಇರುಳಿನ ಅರಿವಿಲ್ಲ
ತುಟಿಯೂ ತುಟಿಯೂ ಸೇರಿರಲೂ
ಮಧುಮಾಸವೇ ಪ್ರತಿಕ್ಷಣವೆಲ್ಲಾ.....2....

ಮನಸೂ ಮನಸೂ ಬೆರೆತಿರಲೂ
ಅಂದವೇ ನೋಡಿದ ಕಡೆಯಿಲ್ಲಾ
ತನುವು ತನುವೂ ಬೆಸೆದಿರಲೂ
ಸ್ವರ್ಗವೇ ನಮಗೇ ಬಾಳೆಲ್ಲಾ......2....

ಸರಸದಿ ವೇಳೆಯು ಕಳೆದಿರಲೂ
ಬರಿ ಬೆಳದಿಂಗಳೇ ಬಿಸಿಲೆಲ್ಲಾ
ಪ್ರಣಯದ ಪಯಣವೂ ಸಾಗಿರಲೂ
ಹರುಷವೂ ನಮಗೇ ಬದುಕೆಲ್ಲಾ.....2....

ಒಲವಿನ ಗೀತೆಯ ಹಾಡುತಿರೇ
ಕಾಮನ ಬಿಲ್ಲಿನ ಬಣ್ಣಗಳೂ
ಪ್ರೇಮದ ಸವಿಯನು ಸವಿಯುತಿದೇ
ಬಾಳಿನ ಜೋಡಿಯ ಕಣ್ಣುಗಳೂ.....2.....

ನಾನೂ ನೀನೂ ಜೊತೆಯಿರಲೂ ಕಾಲದ ನೆನಪೇ ಬೇಕಿಲ್ಲಾ
ಋತುಗಳೂ ಕಾಲದಾ ಮಾತುಗಳೂ ಅವುಗಳ ಭೇದವೇ ನಮಗಿಲ್ಲಾ....ನಾನೂ ನೀನೂ...

* * * * * * * *

9 comments:

Vattam said...

ಎಸ್.ಜೆ ಮತ್ತು ವಿ.ಜೆ Combo ದು ಒಂದು ಗೋಳಿನ ಹಾಡಿದೆ.
"ನಾ ಕಂಡೆ ನಿನ್ನಲ್ಲಿ ಮನೆ ದೇವರ
ನನ್ನ ಮನೆ ದೇವರ
ಆ ಸ್ನೇಹ ವಾತ್ಸಲ್ಯ ಅಜರಾಮರ ...."

Vattam said...

"ದೇವದಾಸಿ" ಚಿತ್ರದ್ದು ಇರ್ಬೇಕಂತ.

ನಾನೊಳ್ಳೆ ಒಂದಕ್ಕೊಂದು ಸಂಬಂಧ ಇಲ್ಲ್ದೆ ಇರೊ ಹಾಡನೆಲ್ಲ ಕೇಳ್ತ ಇದ್ದಿನಿ.

Meera Krishnamurthy said...

ಶಾಂತಲಾ, ನೀವು ಆ ಗೋಳಿನ ಹಾಡನ್ನ್ ನೆನೆಪಿಸಿದ್ದು ಒಳ್ಳೇದಾಯ್ತು, ನಂಗೆ ಮೊದಲಿಂದಲೂ ಆ ಹಾಡು ಅಂದ್ರೆ ಒಂಥರಾ allergy. ಅದು 'ದೇವದಾಸಿ' ಚಿತ್ರದ್ದೇ ಅನುಮಾನವೇ ಇಲ್ಲ. ಆದ್ರೆ ನಂಗೆ ಈ ಚಿತ್ರದ ಹಾಡು ಅಂದ್ರೆ ನೆನಪಿಗೆ ಬರೋದು 'ನಟರಾಜನಾ ಪ್ರಿಯ ಸತಿಯಾದೆನಾ' ಅನ್ನೋ ಎಸ್.ಜಾನಕಿ ಹಾಡಿರುವ solo ಗೀತೆ.

ನೀವು ಸಂಬಂಧ ಇಲ್ಲದೆ ಇರೋ ಹಾಡನ್ನ ಕೇಳಿದರು ಕೂಡ ಸಿಕ್ಕಾಪಟ್ಟೆ ಹಳೇ ಹಾಡುಗಳನ್ನೆಲ್ಲಾ ನೆನೆಸಿಕೊಳ್ಳುವಂತೆ ಮಾಡುತ್ತಿದ್ದೀರ, ನಿಮ್ಮ ಬುತ್ತಿಲಿರೋದನ್ನ ಇಲ್ಲು ಸ್ವಲ್ಪ ಬಿತ್ತಿ.

ಧನ್ಯವಾದಗಳು.

Vattam said...

"ನಟರಾಜನಾ ಪ್ರಿಯ ಸತಿಯಾದೆನಾ
ಈರೇಳು ಧರೆ ಆಳೊ .....", ಹೌದೌದು ಹೀಗೆ ಏನೊ ಬರುತ್ತೆ.

Meera Krishnamurthy said...

ಶಾಂತಲಾ, ಅದು 'ಈರೇಳು ಧರೆಯಾಳೋ ಈಶನರ್ಧಾಂಗಿ ನಾ' ಅಂತ ಮುಗಿಯತ್ತೆ. ಈ ಹಾಡು ರೇಡಿಯೋದಲ್ಲಿ ಯಾವಾಗ್ಲೂ ಬರ್ತಾ ಇರ್ತಿತ್ತು.

ಧನ್ಯವಾದಗಳು.

Vattam said...

"ಕೃಷ್ಣ ಎನ್ನಬಾರದೆ
ಶ್ರೀ ಕೃಷ್ನಾ ಎನ್ನಬಾರದೆ
ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ
ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ
ಕೃಷ್ಣ ಎನ್ನಬಾರದೆ
ಶ್ರೀ ಕೃಷ್ಣ ಎನ್ನಬಾರದೆ ...."

ವಿ.ಜೆ ಹಾಡಿರೊ ಈ ಹಾಡು ಇದೆ ಚಿತ್ರದ್ದು ಇರ್ಬೇಕು.

Meera Krishnamurthy said...

ಹೌದಾ, ಈ ಹಾಡು ಇದ್ರದ್ದಾ? ಯಾಕೇಂದ್ರೆ ನಂಗೆ ವಾಣಿ ಹಾಡಿರೋ ಹಾಡುಗಳು ಕೆಲವು ಚೆನ್ನಾಗಿ ನೆನಪಿದೆ ಕೆಲವು ಮಸುಕು ಮಸುಕಾಗಿದೆ. ಈ ಹಾಡು ಇದ್ರದ್ದು ಅನ್ನೋದೇ ಮರೆತೋಗಿದೆ. ಈ ಚಿತ್ರದಲ್ಲಿ ಇಬ್ಬರು ಹೀರೋಯಿನ್ ಒಬ್ಬಳು ತಮಿಳಿನ ಲತಾ ಇನ್ನೊಬ್ಬಳು ಯಾರು? ಜಯಂತಿ?????

Vattam said...

ನಂಗೆ ಮಸ್ಕ್ ಮಸ್ಕಾಗಿ ಜಯಂತಿ ಮೆಟ್ಟ್ಲು ಹತ್ತಿ ಹೋಗೊದು ಕಾಣಿಸ್ತಿದೆ. ಈ ಚಿತ್ರದ ಬಗ್ಗೆ ಬೇರೆನು ತಿಳಿದಿಲ್ಲ.

Meera Krishnamurthy said...

ನಾನು ಈ ಸಿನೆಮಾನೇ ನೋಡಿಲ್ಲ ಆದ್ರಿಂದ ತಲೆ ಕೆಡೆಸಿಕೊಂಡಿಲ್ಲ, ಕೆಲವು ಹಾಡುಗಳನ್ನ್ ಹಳೇ ಚಿತ್ರಮಂಜರಿ ಕಾರ್ಯಕ್ರಮದಲ್ಲಿ ನೋಡಿದ ನೆನಪು.